ಬೆರಳುಗಳ ಸಂದಿನಲೇ ಲೇಖನಿ ಜಾರುತಿದೆ..ಮಂಪರು!
ಬರೆದ ಪದಗಳ ಗೀಟು ಹೊಡೆದು.
ಬೆರಳುಗಳು ಕಲೆಯಾಗಿ ಕೂತಿಹುದು
ಬರೆದು ಹೊಡೆದ ಸಾಲ ನೆನಪಿಗೆಂದು.
.
.
.
.
.
.
.
.
.
ಕೊನೆಯ ಕಾಣಿಕೆ ಎಂದು ಕಣ್ಣಲ್ಲಿ ಉಸಿರಿಟ್ಟು...ಕೂತರೂ!
ಅನರ್ಥದ ಮೊದಲು ..ಕಸವೇ ಮಾಯವಾಗು ದಯವಿಟ್ಟು
ಗ್ರಾಮದಲಿ ಭೋಗ ಗೃಹವಂತೆ!
ಶಹರದಲಿ ಅನಾಥ ಗುಡಿಯಂತೆ !ನೀ ಹೊರಡು ...
.
.
.
.
.
.
.
ಮುಸ್ಸಂಜೆ ಮುಗಿದಿದೆ ಮುತ್ತ ಸರ ಜಾರಲಿದೆ
ಚೆಲುವ ಕೊರಳ ಉಸ್ತುವಾರಿ ಈಗ ನಿಂದೇ!
ಚಹರೆಯ ತುಂಬೆಲ್ಲ ತುಸು ಉಳಿದು
ಮಿನುಗುತಿದೆ
ನಿನ್ನ ಬೊಗಸೆ ನೀರಿನಲಿ ಮಿಣುಕು
ಇತ್ತೇ?
.
.
.
.
.
.
.
ಬಳಸದೆ ಮಾಸಿದ ಬನಿಯನ್ನಿನ ಮೈಬಣ್ಣ...ಆದರೂ!
ಹೊತ್ತು ಕಳೆದಂತೆಲ್ಲ ರಂಗೆರೋ ಮುಖವರ್ಣ!
ಸನ್ನದ್ಧಗೊಳ್ಳದ ಯುದ್ಧದಲಿ ಮಜವಿದೆ.
ಕವಲೊಡೆದ ಕೈಗಳು ನಿನ್ನ ಮುಖವ ಹಿಡಿದವೆ?!