Tuesday, August 14, 2012

ನೆನಪಿನ ಬೆಲೆ



ನನ್ನ ನೆನಪುಗಳಿಗೆ ಕೇಜಿ ತೂಕವಿಲ್ಲ
ನಾಲ್ಕಾಣೆಗೆ ಬೆಳೆಬಾಳಲ್ಲ  !
ಅರ್ಧ ಮೂಟೆ ಹತ್ತಿಯ ಹಗುರ!
ಹತಾಶೆಗೆ ನೆನೆದರೂ ಭಾರವಾಗಿಲ್ಲ!


ನೆನಪಂತೆ ಬದುಕಂತೆ ಕನಸಂತೆ !
 ಮೂರಕೂ ನಡುವೆ ಸಂಬಂಧವಿಲ್ಲ
ವ್ಯಂಗ್ಯ ನಗು ನಕ್ಕು, ನೋಡಿ ನನ್ನ  ಬಾಳ
ಕಾಲವೂ ನನ್ನೆದುರು ಕೈಚೆಲ್ಲಿತಲ್ಲ!

ನೆನಪುಗಳ ಮಾರಾಟಮಳಿಗೆ ತೆರೆದಿರುವೆ
ಕೊಂಡು ಹೋಗಿ ಬೇಕಾದರೆ ನೆನಪುಗಳನು.   
ಬಿಕರಿಬೆಲೆಗೆ ಮಾರುವೆ ಹೊತ್ತು ಕಳೆದಂತೆ
ಇನ್ನು ಕಾದರೆ ಒಯ್ಯಬಹುದು, ಬಿಟ್ಟಿಯಂತೆ !

ಹಿಂದೆ ನೋಡಿದರೆ ಬರಿಯ ಬಯಲು 
ನಿಮಗೆ ನೋಡಲು ದಟ್ಟಕಾಡದು!
ಹೇಳೋಕಾಗದ ನೂರೆಂಟು ತ್ರಾಸು !
ಕಾಯಲು ಯಾರಿಲ್ಲ ನೆನಪೆಂಬ ರಾಸು

ಬದಕಂತೂ ಕೇಳಲೇಬೇಡಿ ದಯಮಾಡಿ
ನನ್ನದೇ ಬಾಯಲ್ಲಿ ಹೊಗೆಯೆಬ್ಬಿಸಿ ,
ಸುಡುತ್ತ ಒಳಗೊಳ್ಗೆ ಪೂರ್ತಿಯಾಗಿ ,
ತಾನೂ ನಶಿಸುವ ಮೂರ್ಕಾಸಿನ ಬೀಡಿ ಅದು!

...ಇನ್ನು ಕನಸಿನ ಬಗ್ಗೆ ಸಧ್ಯ ಮಾತಾಡಲ್ಲ ಬಿಡಿ


No comments:

Post a Comment