Thursday, August 16, 2012

ಕಣ್ಣು ಕಿವುಡಲ್ಲ... ಕಿವಿ ಕುರುಡಲ್ಲ!!!





ಕಿವಿ ಕುರುಡಲ್ಲ ಕಣ್ಣ್ಕುರುಡಾಗಿರಲು
ನಿಜವು ಸುಳ್ಳಲ್ಲ ಕಣ್ಣು ನೋಡದಿರೆ ಏನು?
ಕಣ್ಣು ಕಿವುಡಲ್ಲ ಕಿವಿ ಕಿವುಡಾದರೇನು!
ಮನಸ್ಸಲ್ಲಿ ಸತ್ಯ ನೊಂದಾಯಿಸಲು
ಅದು ಕಿವಿಯಾದರೇನು ಕಣ್ಣಾದರೆನು ?


ಕಣ್ಣು ಇಷ್ಟು ದಿವಸ ನೋಡಿ ಸುಳ್ಳನು
ಸಾಧಿಸಿರುವುದಾದರೂ ಏನು ?
ಕಿವಿ ಸುಳ್ಳು ಸೊಲ್ಲುಗಳನೇ ಕೇಳಿ
ನಂಬಿರುವುದಾದರೂ ಏನು ?
ಹೀಗಿರಲು  ಆಧ್ಯತೆ ಯಾರಿಗೆ? ಕಿವಿಗೋ ಕಣ್ಣಿಗೋ ?


ಮೆದುಳಿಗೆ ಅದಾವುದಾದರೇನು ಕಣ್ಣೋ? ಕಿವಿಯೋ ?
ಕಣ್ಣು ಕಿವಿಗಳೆರಡನ್ನೂ ನಂಬದದು .
ತಾನೇ ಸತ್ಯವೆಂದು ನಂಬಿಹ ನಿರ್ಭಾವುಕವದು.
ಕಣ್ಣ ನಂಬಿಹೆನೆಂದು ಕಣ್ಣ ಕಣ್ಣೊರೆಸುತಾ
ಕಿವಿಯೇ ತನ್ನ ಕಣ್ಣೆಂದು ಹುಸಿ ನುಡಿದಿಹುದು.
  


ಕಣ್ಣು ಕಾಣುವುದೆಲ್ಲ ಸತ್ಯವೆಂದಾದರೆ
ಹುಟ್ಟುಗುರುಡನಿಗೆ ಸತ್ಯದರ್ಥ ತಿಳಿದಿಲ್ಲವೇನು ?
ಕಿವಿಯೇ ಶ್ರೇಷ್ಠ ವೆಂದಾದರೆ ಕೆಪ್ಪನು
ತನ್ನ ನಿಂದನೆಯ ಸತ್ಯವ ಕಾಣಲಾರನೇನು ?
ಆದರೂ ಸುಮ್ಮನಿರುವ ಆತ ಕುರುಡನೂ ಆಗಿಲ್ಲವೇನು ?


 ಸುಳ್ಳು ನುಡಿಯದೆ ಸುಮ್ಮನಿದ್ದ ಮಾತ್ರಕೆ
 ಕಣ್ಣ ಕಿವಿಗಳ ಉಸಾಬರಿ ಧಿಕ್ಕರಿಸಿ
 ಕಿವುಡ ಕುರುಡನೆರಡೂ ಆಗಿರುವ
 ತನ್ನತನವ ಮರೆತ ಮೂಕನಲ್ಲದವನ
 ಸತ್ಯ ವಿವರಿಸದ ನಾಲಿಗೆ ಸುಳ್ಳಲ್ಲವೆನು?      

No comments:

Post a Comment