ಹೀಗೆಯೇ ಎಲ್ಲವೂ ಮರೆಯಾಗುವವು
ಅಂದಿನ ನಡಾವಳಿ ಅಂದಿನ ಹಂಬಲ
ಬದುಕಲಿ ಸಂಬಂಧಗಳು ನಮ್ಮದಾದಂತೆ
ಎಲ್ಲವೂ ಅಡ್ಡಗಾಲಂತೆ ತೋರುತಿರಲು ...ಎಲ್ಲವೂ
ಮರೆಯಾಗುವು .
ಕಾಳಜಿ ವಿಪರೀತ... ಭಾವಗಳು ಅತಿರೇಕ...
ಅಂದಿನ ಸಹಜತೆ ;ಅದು ಪ್ರತಿಕ್ಷಣದ ಇರುವಿಕೆ
ಇಂದು ಎಲ್ಲ ತಮ್ಮ ಪಾಡಿಗೆ ತಾವು
ಬರಿ ಕುಶಲೋಪರಿ... ಅಪರಾಧಿ ಪ್ರಜ್ಞೆ ಕಾಡದಿರಲೆಂದು
ಅಣು ಅಣುವನೆಲ್ಲ ಆವರಿಸಿದ್ದ ನೆನಪು
ಬಯಸಿದರೂ ಒಂದಕ್ಷರ ನೆನಪಾಗದು ಈಗೀಗ
ನಾ ಹೆಸರಿಡಲಾಗದ ಆಕ್ರತಿ ಈಗ ಆ...ಕೃತಿ
ಕೊನೆಗೂ ಗೆದ್ದ ಭಾವ ಆವರಿಸಿತೆನ್ನನು
ಕರಗಲು ಮಂಜು ರವಿಯು ಅತ್ತಂತೆ ಗೋಚರ
ಕರಗಿಸಿ ಮರುಗಲೇನಿರಬಹುದು ಕಾರಣ
ಮುಂಜಾವು ಮೂಡಲು ಮಂಜಿನಲಿ ಮಳೆಬಿಲ್ಲು
ತೋರುವದು ಎಲ್ಲವೂ ನಿರಾಳ.. ಆನಂತರ...
ಅನಿವಾರ್ಯಕೆ ಅನುಬಂಧ ಬಲಿಯಾಗಲೇ ಬೇಕು
ಬಂಧವಾಗದ ಭಾವ ಕೊಂಡಿ ಕಳಚಲೇಬೇಕು
ಕೊಳದಲಿ ತಿಳಿನೀರು ಮಳೆಯಾಗುವ ತನಕ
ನದಿಯಲಿ ಹಳೆನೀರೂ ಮಳೆಯಾಗುವತನಕ
No comments:
Post a Comment