Friday, August 17, 2012

ಹಳೆಯ ಜೋಡು ಹೊಸತಲ್ಲ!!!

 


ಎಂದೋ ಕಣ್ಮರೆಯಾಗಿದ್ದ ಹಳೆಯ ಜೋಡೊಂದು
ಮತ್ತೆ ದೊರಕಿತ್ತು ಆ ದಿನ
ಆದರೆ ಈಗ ಹೊಸತಲ್ಲವದು ,
ಯಾರೂ ಬಳಸದೇ ಧೂಳು ಹಿಡಿದಿರಲು .
ಅಲ್ಲಲ್ಲಿ ಸವೆದು ಅಂಗುಷ್ಠ ಕಿತ್ತಿರಲು.

ಏನೋ ತನ್ನದೆಂಬ ಭಾವಕ್ಕೆ
ನಿತ್ರಾಣದಿಂದ ಬಡಿದು ನೆಲಕ್ಕೆ 
ಹಿಂದೆ ಹೊಸದಿತ್ತೆಂಬ  ಜಂಭಕ್ಕೆ
ತೊಟ್ಟು ಠೀವಿಯಿಂದ ನಡಿಯಹೊರಟ
ಅಜ್ಜನೊಬ್ಬನ ಕಾಲನ್ನು ಮುಳ್ಳು ಛೇದಿಸಿತ್ತು 

ಮುಳ್ಳನು ಸ್ವಾಗತಿಸಿದ ಚಪ್ಪಲಿ 
ತಾನು ತೂತಾಗಿ ಮುಚ್ಚಿದೆ ಮುಳ್ಳಿನಿಂದಲೇ!
ಹೊಸ ಚಪ್ಪಲಿಯಾದರೂ ಅದರ ಹಳೆಯತನ
ನೀಡಿತೆಕೆ ಮುತ್ಸದ್ದಿ ಜೀವಕೊಂದು ಇಂತಹ ನೋವನ?
ಹಳೆಯ ಚಪ್ಪಲಿ...ಹಳೆಯ ಜೀವ...ಆದರೆ ರಕ್ತ ?

ಇಷ್ಟು ದಿನ ತಾ ಆಚೆ ಬಂದಿರದ ಕಾರಣ ಮಾತ್ರಕೆ 
ಅದೇನು ನವಜಾತವೇ ?
ಚರ್ಮದಿಂದ ಈ ವರೆಗೆ ಬಂಧಿಯಾದ ಅದು 
ಬಿಡುಗಡೆಯ ಎದುರು ನೋಡುತಿರುವ ಹಳೆ ಖೈದಿಯೇ ?
ರಕ್ತಕೆಲ್ಲಿದೆ ಹಳೆಯದು ಹೊಸದು ?

ಕಪ್ಪು ಮುಳ್ಳಿಗೆ ಅಂದು ಅದರಿಷ್ಟದ ಕೆಂಪು ಅಭಿಷೇಕ 
ಮುಳ್ಳಿಗೇನು ಗೊತ್ತು; ಅದು ಸಂಪೂರ್ಣ ಸ್ನಾನವಾಗುವದೆಂದು?
ಅದು ಚುಚ್ಚಿರುವುದು "ಇಂದೋ ನಾಳೆಯೋ?" ಹಿರಿ ಜೀವವನು 
ಚಪ್ಪಲಿಗೆನು ಗೊತ್ತು ತನಗೆ ಮರ್ಯಾದೆ ದಕ್ಕಿರುವುದು ಆ ಹಿರಿತನದಿಂದ 
ತನ್ನಿಂದ ಈಗ  ತ್ರಾಣ ತೊರೆದ ಮುತ್ಸದ್ದಿ ದೇಹದಿಂದ !!!    








No comments:

Post a Comment