Sunday, June 9, 2013

ಅಪಾರ ನಿನ್ನ ...



ಅಪಾರ ನಿನ್ನ ಮಹಿಮೆಯ ಕಡಲು ಅಪಾರ ನಿನ್ನ ..
ಸೃಷ್ಟಿ ಎಂಬ ಹೆಸರು ಇಟ್ಟೆ .
ಭೂಮಿ ಎಂಬ ಚೆಂಡು ಬಿಟ್ಟೆ .
ತಿರುಗಿಸುತಲೇ ಕುಳಿತುಬಿಟ್ಟೆ.
ಬೆಳಕ ಶಕ್ತಿ ಬಿಂದು ಕೊಟ್ಟೆ !
ಅಪಾರ ನಿನ್ನ ಮಹಿಮೆಯ ಕಡಲು ಅಪಾರ ನಿನ್ನ ..

ಒಂದು ಅಂಗ ಕಳೆದು ಬಿಟ್ಟೆ.
ಲಿಂಗ ಬೇಧ ಎಂದು ಬಿಟ್ಟೆ.
ಶೀಲವೆಂಬ ಬೇಲಿ ಇಟ್ಟೆ .
ವಂಶ ವೃದ್ಧಿಯ ನೆಪವ ಕೊಟ್ಟೆ!
ಅಪಾರ ನಿನ್ನ ಮಹಿಮೆಯ ಕಡಲು ಅಪಾರ ನಿನ್ನ ...

ಪುಣ್ಯಕೆ ಶುಲ್ಕ ವಿಧಿಸಿ
ಪಾಪ ಮಾಡಲು ತೆರಿಗೆ ತೆಗೆಸಿ
ಮಾನವೆಂಬ ಪರದೆ ಕೊಡಲು
ಬಟ್ಟೆ ಮುಚ್ಚಿದೆ ಪಾಪ ಜನಕವನೇ !
ಅಪಾರ ನಿನ್ನ ಮಹಿಮೆಯ ಕಡಲು... ಅಪಾರ ನಿನ್ನ ...

ಪ್ರೇಮ ಬಂಧವನ್ನು ರಚಿಸಿ
ನಿರ್ಬಂಧ ನೂರು ವಿಧಿಸಿ
ಸಂಬಂಧಗಳ ಸಂಧಿಯೊಳಗೆ
ನಿನ್ನ ನೀನೇ ಹುಡುಕುತಿರು ಎಂದೇ ...
ಅಪಾರ ನಿನ್ನ ಮಹಿಮೆಯ ಕಡಲು... ಅಪಾರ ನಿನ್ನ

ಬುದ್ಧಿಗೆಂದು ಶಾಲೆ ಕೊಟ್ಟೆ
ಆಟಕೂ ವಯಸನಿಟ್ಟೆ.
ಕನಸ ಕಾಂಬ ಕಣ್ಣು ಕೊಟ್ಟೆ .
ತೊಳೆಯಲು ಕಣ್ಣೀರನೇ ಕೊಟ್ಟೆ !
ಅಪಾರ ನಿನ್ನ ಮಹಿಮೆಯ ಕಡಲು... ಅಪಾರ ನಿನ್ನ

ಒಳಗೆ ಒಳ್ಳೆತನವ ಕೊಟ್ಟು
ಉದರಕೆ ಹಸಿವನಿತ್ತು
ಕೆಟ್ಟತನಕೆ ಕಳ್ಳನೆಂದು
ಒಳ್ಳೆತನಕೆ ‘ಮಳ್ಳ ‘ ಎನಲೇಕೆ ?
ಅಪಾರ ನಿನ್ನ ಮಹಿಮೆಯ ಕಡಲು... ಅಪಾರ ನಿನ್ನ

ಮೊದಲು ನಾನು ಮೊದಲು ನೀನು!
ಬದುಕಲು ಪೈಪೋಟಿ ನೂರು.
ಕೊನೆಗೆ ಗೆಲುವು ಕಾಣೋ ವೇಳೆ,
ಸಾವಿಗವಿರೋಧ ಆಯ್ಕೆ ನೀ ಎಂದೆ !
ಅಪಾರ ನಿನ್ನ ಮಹಿಮೆಯ ಕಡಲು... ಅಪಾರ ನಿನ್ನ ಮಹಿಮೆಯ ಕಡಲು !!!

--------------------------------------------------Inspired by “Original choice”! (Director Special credit track )

1 comment: