ಸ್ವಜ
ಸಾಯುತಿರುವ ಸಣಕಲು ಸಂಜೆ ತಾ
ಮತ್ತೆ ಕಾದಿದೆ... ಸುತ್ತ ನೋಡದೆ.
ಬಣ್ಣ ತಗುಲಿದ ಭಾವಪೇಟೆಯ
ಬೆಳಕು ದಹಿಸದೆ ಒತ್ತಿ ಹಿಡಿದಿದೆ.
ಹಿಡಿದು ಕಾದಿದೆ ಏನೂ ಕೇಳದೆ .
ಬರದ ಬೇಗೆಗೆ ಬರದೆ ಹೋದರೆ
ಎನಿತು ಬಂತೋ ಅರಳೋ ಹೂವಿಗೆ
ಬಾಗಿ ನಿಂತ ಬಿದಿರು ಕರೆದಿದೆ.
ಧೈರ್ಯ ಸಾಲದೇ ತಡವ ಮಾಡಲು
ಕೊನೆಗೀಗ ಬರವೇ ಮುಗಿದಿದೆ.
ಮರೆತ ಕಲರವ ಮತ್ತೆ ಕೇಳುವ
ಹುಳುಕು ಸ್ವಪ್ನದ ಕೊನೆಯ ಆಸೆಗೆ
ಹೇಳಿ ಕೇಳಿ ಅರಿವ ಮರೆಸುವ
ಮೂಲೆ ಸೇರಿದ ಕಡೆಯ ಸಾಲಿನ
ಅರ್ಥ ತಿಳಿಯುವ ತಪವಗೈದಿದೆ.
ಬದುಕ ಮುಗಿಸದೇ !
ಬದುಕ ಮುಗಿಸದೇ !
No comments:
Post a Comment